ಬಹುಮುಖ ಪ್ರತಿಭೆ, ನೆರಳ ನೋಡಿ ನೃತ್ಯ ಕಲಿತ ನಾಟ್ಯಗಾರ ಸೂರಜ್ ಸನಿಲ್.






ಅಂದು ತನಗೆ ಬಿಲ್ವಿದ್ಯೆ ಕಲಿಸಲು ಒಲ್ಲೆ ಎಂದ ದ್ರೋಣರಿಗೆ ಅವರದೇ ಮಣ್ಣಿನ ಮೂರ್ತಿಯ ಮಾಡಿ ಅದನ್ನಿಟ್ಟುಕೊಂಡು ಬಿಲ್ವಿದ್ಯೆ ಕಲಿತು ಅವರನ್ನೇ ಮೀರಿಸಿದ ಮಹಾನ್ ಬಿಲ್ಲುಗಾರ ನಮ್ಮ ಏಕಲವ್ಯ..
ಇಂದಿಗೂ ಆಸಕ್ತಿ, ಶ್ರದ್ಧೆ ಇದ್ದರೆ ಏನಾನ್ನದರೂ ಸಾಧಿಸಬಹುದೆಂಬ ಉದಾಹರಣೆಗೆ ಅವನೊಬ್ಬ ಸಾಕು..  ಈ ಮಾತಿನ ಪ್ರಸ್ತಾಪಕ್ಕೆ ಕಾರಣ ನಾನಿಂದು ಅಕ್ಷರಗಳ ಅರ್ಪಣೆಗೈಯಲು ಹೊರಟಿರುವ ಈ ವ್ಯಕ್ತಿ...  ಖಂಡಿತಾ ವ್ಯಕ್ತಿ ಲೇಖನ ಬರೆಯದೇ ವಿರಾಮ ಇಟ್ಟುಬಿಟ್ಟ ಕೈಗಳಿಗೆ ಮತ್ತೆ ಸ್ಪೂರ್ತಿಯ ತುಂಬಿದ್ದು ಇದೇ ವ್ಯಕ್ತಿ. ಹೇಗೆ ಅಂದು ಏಕಲವ್ಯ ಯಾರ ಸಹಾಯವೂ ಇಲ್ಲದೇ ಮಣ್ಣಿನ ಮೂರುತಿಯ ಗುರುವಾಗಿ ಮಾಡಿ ಬಿಲ್ವಿದ್ಯೆ ಕಲಿತರೋ ಹಾಗೆಯೇ ಇವರೂ ಕೂಡಾ ಯಾರ ಸಹಾಯವೂ ಇಲ್ಲದೆ ನೆರಳನ್ನು ನೋಡಿ ನ್ರೃತ್ಯ ಕಲಿತು ಈಗ ಸಾಧನೆಯ ತೇರೆಳೆದು ನಿಂತಿರುವ ಸಾಧಕ... ನಮ್ಮ ನಿಮ್ಮೆಲ್ಲರ ಮೆಚ್ಚಿನ, ಶಿಷ್ಯರ ಗುರುವಾಗಿ, ತಂಗಿಯರ ಮುದ್ದಿನ ಅಣ್ಣನಾಗಿ, ಮಂದಹಾಸದ ನಗೆಯ ಒಡೆಯನಾಗಿ ಎಲ್ಲರೊಳಗೊಂದಾಗುವ ಸೂರಜ್_ಸನಿಲ್ ರವರು.... 




ಕಲಾವಿದನ ಬದುಕೇ ಹಾಗೇ..  ಕಲೆ ಒಂದೇ ಆದರೂ ಅದನ್ನು ಸಂಧಿಸುವ ಆ ದಾರಿಗಳು ಬಲು ವಿಚಿತ್ರ.. ಈ ಕಲಾವಿದ ಕೂಡಾ ಇದೇ ರೀತಿ.. ತನ್ನ ಎಂಟನೇ ವಯಸ್ಸಿಗೇ ತನ್ನ ಕಿರಿಯ ವಯಸ್ಸಿನ ಹುಡುಗನಿಗೆ ನ್ರೃತ್ಯ ಹೇಳಿಕೊಟ್ಟು ಪ್ರಶಸ್ತಿ ಬಾಚಿಕೊಂಡವರು.  ಅಂದಿನಿಂದ ಕನಸಿನ ಗೋಪುರ ಕಟ್ಟಿದವರೇ ತಿರುಗಿ ನೋಡದೆ ಕಠಿಣ ಪರಿಶ್ರಮದಿಂದ ಸುಮಾರು 600 ಆಸಕ್ತ ಮಕ್ಕಳ ಕಾಲಿಗೆ ಗೆಜ್ಜೆಯ ಕಟ್ಟಿ ತಕಧಿಮಿತ ಆಡಿಸಿಯೇ ಬಿಟ್ಟರು.  
ಎಂಟನೇ ತರಗತಿಯಲ್ಲಿ #ಕೂಲ್_ಫ್ರೇಂಡ್ಸ್_ಆಫ್_ಡ್ಯಾನ್ಸ್_ಅಕಾಡೆಮಿ# ಆರಂಭಿಸಿ 600 ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ಕಲ್ಪಿಸಿದರು. ಪರಿಶ್ರಮಕ್ಕೆ ತಕ್ಕ ಫಲವೆಂಬಂತೆ 400 ಮಕ್ಕಳಿಗೆ ರಾಜ್ಯಪ್ರಶಸ್ತಿ ಲಭಿಸಿತು.  





ಬದುಕನ್ನು ಬರಿಯ ಕುಣಿತಕ್ಕೆ ಮೀಸಲಿಡದೆ ಪಾತ್ರಕ್ಕೆ ಬಣ್ಣ ತುಂಬುವ ಕನಸನ್ನು ಕಾಣಲು ಆರಂಭಿಸಿದವರೇ,  ಮಂಗಳೂರಿನಲ್ಲಿ ನಡೆದ #ಪೊರ್ಲ_ತೆಲಿಕೆ_ಬೊಕ್ಕ_ನೋಟ# ಎಂಬ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಚಿತ್ರಗಳಲ್ಲಿ ನಟಿಸುವ ಅವಕಾಶಗಳನ್ನು ಗಿಟ್ಟಿಸಿಕೊಂಡರು. 
ಜೊತೆಜೊತೆಯಲಿ ತಮಿಳು,  ಮಲಯಾಳಂ,  ಕನ್ನಡದ ಸುಮಾರು ಹದಿನೈದು ರಿಯಾಲಿಟಿ ಶೋಗಳಲ್ಲಿ ತನ್ನ ಛಾಪನ್ನು ಮೂಡಿಸಿದರು.  ನಟನಾಸಾಕ್ತಿಯಲ್ಲಿ ಮುಂದುವರೆಯಲು ಹೆಚ್ಚಿನ ತರಬೇತಿಗಾಗಿ ಬೆಂಗಳೂರಿನ ಎಎಪಿ ಸಂಸ್ಥೆಯಲ್ಲಿ ಉಷಾ ಭಂಡಾರಿ ಅವರಿಂದ ಪಡೆದು ರಂಗಕಲೆಯಲ್ಲಿ ನೈಪುಣ್ಯತೆಯನ್ನು ಪಡೆದರು.  ಅಲ್ಲಿ #ಇಡಿಪಸ್_ನೀನೂ_ಬಾ ಪಾತ್ರ ನಿಭಾಯಿಸಿ ಪ್ರಶಂಸೆ ಪಡೆದರು.  ಇದು ಅವರ ಅಚ್ಚುಮೆಚ್ಚಿನ ನಟನೆಯೂ ಹೌದು.  ನಂತರ ಅನಿಲ್ ಮ್ಯಾಥ್ಯೂ ಅವರ ಮೊದಲ ಚಲನಚಿತ್ರ  #ಸ್ನೇಹ_ತಾಳ್ವರಂ#ನಲ್ಲಿ ಭಾಷೆ ಅರಿಯದಿದ್ದರೂ ಪಾತ್ರದಲ್ಲಿ ತನ್ನನ್ನು ತೊಡಗಿಸಿಕೊಂಡು ನಟಿಸಿ ಅತ್ಯುತ್ತಮ ನಟನೆಂಬ ಪ್ರಶಸ್ತಿಗೆ ಭಾಜನರಾದರು. ನಂತರ #ತುಳು ಭಾಷೆಯ ಕುಡ್ಲ ಕೆಫೆಯಲ್ಲೊಂದು ನಟನೆಯನ್ನು ಮಾಡಿ ಬಳಿಕ #ಪುಂಡಿ_ಪಣವು# ಚಿತ್ರದಲ್ಲಿ ನಾಯಕನಟನಾದರು. 





ಕರಾವಳಿಯ ಹೆಸರಾಂತ ಚಾನಲ್ #ನಮ್ಮ_ಟಿವಿ#ಯಲ್ಲಿ #ಡಾನ್ಸ್_ಮಮ್ಮಿ_ಡಾನ್ಸ್# ಕಾರ್ಯಕ್ರಮದಲ್ಲಿ ಸೀಸನ್ ಒಂದು ಮತ್ತು ಎರಡರಲ್ಲಿ ನಿರ್ದೇಶಕರಾಗಿದ್ದವರು ಅದೇ ಕಾರ್ಯಕ್ರಮದ ನಿರ್ಮಾಯಕರಾದರು.  ಮುಂದೆ #ಝೀ_ಕನ್ನಡ# ವಾಹಿನಿಯ #ಕುಣೀಯೋನು_ಬಾರಾ# ಐದನೇ ಹಂತದ ಉತ್ತಮ ನಿರ್ದೇಶಕನೆಂಬ ಬಿರುದನ್ನು ಸಾಹಸಸಿಂಹ ವಿಷ್ಣುವರ್ಧನ್ ಅವರಿಂದ ಪಡೆದುಕೊಂಡರು. 
#ಡಿ_ಡಾನ್ಸ್_ತಮಿಳು# #ಈ_ಟಿವಿ_ತೆಲುಗು# #ಈ_ಟಿವಿ_ಕನ್ನಡ# #ಡಿ_ಜ್ಯೂನಿಯರ್ಸ್_ಮಮ್ಮೀ_ಡಾನ್ಸ್# #ಸ್ಪಂದನ_ಡಾನ್ಸ್_ಕಾ_ಸೂಪರ್# ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಇವರ ಮಿಂಚುವಿಕೆಯ ಸವಿನೆನಪಿದೆ. ಇವೆಲ್ಲದರ ಜೊತೆಗೆ ಬೆಸೆಂಟ್ ಗರ್ಲ್ಸ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ವಿದ್ಯಾದಾನಗೈದಿರುವುದೂ ಕೂಡಾ ಮೆಚ್ಚುವಂತದ್ದು. 




ಸಾವಿರ ಕನಸುಗಳನ್ನು ಕಂಗಳಲ್ಲಿ ಹೊತ್ತು ಸಾಗುತ್ತಿರುವ ಈ ಕಂಗಳಿಗೆ ಜಯದ ನಿಲ್ದಾಣ ಸಿಗಲಿ.  ಪ್ರತಿಫಲ ಬಯಸದೇ ಗುರುವಾದ ಆ ವಿದ್ಯಾದಾನದ ಪುಣ್ಯಗಳು ದೊರೆತು, ಬಾಳಲ್ಲಿ ಇಟ್ಟ ಹೆಜ್ಜೆಗಳೆಲ್ಲ ಇತಿಹಾಸವಾಗಲಿ.  ನಗುವ ಆ ಸೌಮ್ಯ ಮುಖದ ನಗು ಎಂದೆಂದೂ ಹಾಗೇ ಇರಲಿ, ಇತರರಿಗೆ ಮಾದರಿಯಾಗಿ ಬೆಳೆದು ಆದರ್ಶ ವ್ಯಕ್ತಿಯಾಗಿ ನಿಲ್ಲಲಿ,  ಅತ್ಯತ್ತಮ ಅವಕಾಶಗಳರಸಿ ಬಂದು ಬಹುಬೇಡಿಕೆಯ ಬಹುಭಾಷ ನಟನಾಗಲಿ ಎಂಬುದೇ ಈ ಪುಟ್ಟ ತಂಗಿಯ ಸಾಲುಗಳ ಆಶಯ. 



ಯಶು ಬೆಳ್ತಂಗಡಿ.