ಗಂಡು ಹೆಣ್ಣೆಂಬ ಕಾದಾಟದಲ್ಲಿ ಬಲಿಪಶುವಾದರೆ ಮುಗ್ಧ ಮನಸ್ಕರು?? ಯಶು ಬೆಳ್ತಂಗಡಿ: SR Kannada.
ಅದೊಂದು ಕಾಲವಿತ್ತು ಗಂಡಿಲ್ಲದ ಮನೆ ಜೀವಂತಿಕೆಯಿಲ್ಲದ ಮನೆಯಂತೆ. ಮನೆಗೊಬ್ಬ ಮಗ ಬೇಕೆ ಬೇಕೆಂಬುದು ಅವರ ಮನದಾಳದ ಮಾತಾಗಿತ್ತು. ಗಂಡಿಲ್ಲದ ಮನೆಯನ್ನು ವಿಕೃತಿಗಾಗಿ ಬಳಸಿಕೊಳ್ಳುವ, ಅವರನ್ನು ವಿಚಿತ್ರವಾಗಿ ಕಾಣುವ ಜೀವನವೂ ಇತ್ತು. ಮನೆಯಲ್ಲಿ ಗಂಡಿಲ್ಲದಿದ್ದರೆ ಯಾರ ಭಯವೂ ಇರುವುದಿಲ್ಲವೆಂಬ ನಂಬಿಕೆಯು ಇತ್ತೂ. ಗಂಡೆಂದರೆ ಪ್ರತೀ ಹೆಣ್ಣಿನ ಧೈರ್ಯವಾಗಿ, ಅವಳ ಜೀವನದ ಭಾಗವಾಗಿದ್ದ.. ಅವಳ ಎಲ್ಲಾ ಭಾವನೆಗಳನ್ನು ಹಂಚಿಕೊಂಡು ಸಂತಸದ ದಿನಗಳನ್ನು ಆಕೆಗೆ ಜೀವನವಿಡೀ ಹಂಚಿ ಅವಳ ಜೀವನವನ್ನು ಸಿಹಿಯನ್ನಾಗಿಸಿದ್ದ. ಆದರೆ ಕಾಲ ಬದಲಾದಂತೆ ಜನರ ಮನ ಬದಲಾಗಿ ಹೆಣ್ಣೂ ಗಂಡಿಗೆ ಸರಿಸಮಾನಳಾಗಿ ನಿಲ್ಲುವಳೆಂಬ ಭಾವನೆ ಬಂತು. ಅವಳಿಗೆ ಎಲ್ಲವನ್ನೂ ಎದುರಿಸುವ ಸಾಮಾರ್ಥ್ಯ ಕಲಿಸಿಕೊಟ್ಟರು. ವಿದ್ಯೆ, ಬುದ್ಧಿ, ಸಾಧನೆ ಎಲ್ಲದಕ್ಕೂ ಜೊತೆಯಾಗಿ ಅವಳನ್ನು ಸಮಾಜದ ಮುಂದೆ ತರಲಾಯಿತು. ಅವಳಿಗೆ ಬೆನ್ನುಲುಬಾಗಿ ಪ್ರತೀ ಅಣ್ಣ, ತಂದೆ, ತಮ್ಮಂದಿರು ನಿಂತು ಅವಳನ್ನು ಸಮಾಜದಲ್ಲಿ ತಲೆಯೆತ್ತಿ ನಿಲ್ಲಲು ತಾವೂ ಜೊತೆಯಾದರು. ಅವಳಿಗೆ ಕೊಟ್ಟ ಈ ಗೌರವ, ಪ್ರೋತ್ಸಾಹದ ಪ್ರತೀಕವಾಗಿ, ಸಾಧಕರ ಜೊತೆಯಲ್ಲಿ ಹೆಣ್ಣು ಪೈಪೋಟಿ ಕೊಟ್ಟು ನಿಂತಳು.. ಇಂದು ನಾವೆಲ್ಲ ಕಂಪ್ಯೂಟರ್ ಅಥವಾ ಕಲಿಯುಗದಲ್ಲಿದ್ದೇವೆ. ಪುರಾಣಗಳ ಪ್ರಕಾರ ಈ ಕಲಿಯುಗದಲ್ಲಿ ಜಗತ್ತು ನೂರಕ್ಕೆ ನೂರು ಸುಳ್ಳುಗಳಿಂದ ತುಂಬಿರುತ್ತವೆಯಂತೆ. ಇದು ನಿಜವೆಂದು ಸಾ...









