ಬಾಲ್ಯದಾಚೆಗೆ ಯೌವನದೆಡೆಗೆ ಪಯಣ...


ನಾವು ಬಾಲ್ಯದಲ್ಲಿ ಏನೆಲ್ಲಾ ಮಾಡಿದ್ದು, ಏನೆಲ್ಲಾ ಆಡಿದ್ದು, ಹಾಡಿದ್ದು, ಕುಣಿದಿದ್ದು, ಮರ- ಕೋತಿ, ಕಬಡ್ಡಿ, ಚಿನ್ನಿದಾಂಡು, ಕೆರೆಯಲ್ಲಿ ಈಜು, ಮಾವಿನತೋಪ, ಕಲ್ಯಾಣಿ, ಕಳ್ಳ-ಪೊಲೀಸ್ ಹೀಗೆ ಇತ್ಯಾದಿ... ಬಾಲ್ಯದ ಪಯಣವನ್ನು ಮುಗಿಸಿದ್ದು ಹೀಗೆ. ತಂದೆ-ತಾಯಿಗಳಿಗೆ ತಮಾಷೆ ಮಾಡೋದು, ಕೀಟಲೆ ಮಾಡುವುದು ಹೀಗೆ... ಮನೆಯಲ್ಲಿ  ನಾವು ಇಬ್ಬರು ಗಂಡು ಮಕ್ಕಳು, ಹಾಗಾಗಿ ಮಗನನ್ನ ಮಗಳ ತರಹ ನೋಡಿಕೊಳ್ಳುವವರು ನಮ್ಮ ಅಪ್ಪ ಅಮ್ಮ, ನನ್ನ ಸಹೋದರನಿಗೂ ಅಷ್ಟೇ ತುಂಬಾ ಪ್ರೀತಿಯಿಂದ ಬೆಳೆಸಿದರು. 




"ನಾವು ಅಂಗಳದಲ್ಲಿ ಆಡಿ ಬಂದರೆ ಅಂಗಾಲ ತೊಳೆದು ಕೈ ತುತ್ತು ನೀಡುವ ನನ್ನವ್ವ, ಒಂದಿಷ್ಟು ಬೇಸರ ಮಾಡಿಕೊಳ್ಳದ ನನ್ನವ್ವ, ಎಷ್ಟೇ ಎತ್ತರಕ್ಕೆ ಏರಿದರು ಕೈತುತ್ತು ನೀಡುವಳು ನನ್ನವ್ವ.
ನಮ್ಮ ಇಬ್ಬರಿಗೂ ತಂದೆ ತಾಯಿ ಋಣ ಎಷ್ಟೇ ಜನ್ಮ ಎದ್ದು ಬಂದರೂ ತೀರಿಸಲಾಗಲ್ಲ. ಬಾಲವನ್ನು ನೆನೆಸಿಕೊಂಡರೆ ತುಂಬಾ ಫೀಲ್ ಆಗುತ್ತೆ. ಯಾಕೆಂದರೆ...?

ಬಾಲ್ಯದಲ್ಲಿ ಆಡಿರೋ ಆಟ, ಫ್ರೆಂಡ್ಸ್ ಜೊತೆ ಸುತ್ತಾಡೋದು, ಸಿನಿಮಾ ನೋಡೋದು, ಬಹಳ ಜಾಲಿಯಾಗಿ ಎಂಜಾಯ್ ಮಾಡಿದ್ದು, ಹೊಡೆದಾಟ ಕಚ್ಚಾಟ ಅನೇಕ ರೀತಿಯಲ್ಲಿ. ಆಗ 2002 2003 ಸಾಲಿನಲ್ಲಿ  ಸ್ನೇಹಿತರ ಜೊತೆ ಬೆರೆತದ್ದು ನೆನೆಸಿಕೊಂಡರೆ, ತುಂಬಾನೇ ಕಾಡುತ್ತಿರುತ್ತದೆ ಮನದೊಳಗೆ...


ನಾನು ಕರಾಟೆ ಕಲಿಯೋಕೆ ಹೋದಾಗ ಅಲ್ಲಿನ ವಾತಾವರಣ, ಮತ್ತೆ ಅಲ್ಲಿದ್ದ ಸ್ನೇಹಿತರು ಪರಿಚಯವಾದರು, ಅಲ್ಲಿಂದ ನನ್ನ ಜರ್ನಿ ಸ್ಟಾರ್ಟ್ ಆಯ್ತು. ನನಗೆ ಕರಾಟೆ ಕಿಂಗ್ ಎಂಬ ಬಿರುದು ಪ್ರಾಪ್ತವಾಯಿತು. ದಿನೇಶ್ ಅಂತ ಇದ್ದದ್ದು ಕರಾಟೆ ಕಿಂಗ್ ಎಂದೆ ಪ್ರಸಿದ್ಧವಾಯಿತು, ಸುತ್ತಮುತ್ತಲಿನ ಶಾಲೆಗಳಿಗೂ ಹೆಸರುವಾಸಿಯಾಯಿತು‌. ಆಗ ಸಣ್ಣವಯಸ್ಸಿನಲ್ಲಿ ಕೂಡ ಕವಿತೆಗಳು ಕವನಗಳು ಸಣ್ಣ ಕಥೆಗಳು ಹೀಗೆ ಹಲವಾರು ಓದುತ್ತಾ ಬರೆಯುತ್ತಾ ಬಾಲ್ಯದಲ್ಲಿ ಸ್ಟಾರ್ಟ್ ಆದ ಕವಿತೆ ಮುಗಿಲು ಮುಟ್ಟುವಂತೆ ಮಾಡಿತ್ತು. ನನ್ನ ಬಾಲ್ಯ 2009ರವರೆಗೆ ಮುಗಿದಿತ್ತು, 

ಯವ್ವನದೆಡೆಗೆ ನನ್ನ ಪಯಣ ಸಾಗುತ್ತಾ ಬಂತು, ನನಗೆ ಒಂಟಿ ಸಲಗ ಅನ್ನುವ ಹೆಸರೂ ಬಂತು. ನನಗೆ ಹಲವಾರು ಹೆಸರು ಕರೆದರೂ, ನಿಜವಾದ ಹೆಸರು ಇದ್ದಿದ್ದು ಕರಾಟೆ ಕಿಂಗ್ ಎಂದು,  ಅದನ್ನು ಮುಗಿಸಿ ಮತ್ತೆ ಒಂಟಿ ಸಲಗ ಎಂದು ಹೆಸರು ಉಳಿಯಿತು. 


ತದನಂತರ ಎಲ್ಲಾ ಕೆಲಸಗಳನ್ನು ಮಾಡಿ, ಕಷ್ಟ ಸುಖಗಳನ್ನು ಅನುಭವಿಸಿ ಸಿನಿಮಾಕ್ಕೆ ಕಣ್ಣು ಹಾಕಿದೆ. ಯಾಕೋ ಒಲ್ಲದ ಮನಸ್ಸಿನಿಂದ ತಳ್ಳಿಹಾಕಿತ್ತು ಚಿತ್ರ ರಂಗ. 4 -5 ವರ್ಷ ತುಂಬಾ ಅಲೆದೆ, ಯಾರೂ ಗುರುತಿಸಲಿಲ್ಲ. ಆದ ನಂತರ ನಾನು ಬೀರೂರುನಲ್ಲಿ ಕೆಲಸ ಮಾಡುತ್ತಿರುವ ವೇಳೆಯಲ್ಲಿ ನನಗೆ ಸಿಕ್ಕಿದ ಸ್ನೇಹಿತರು ಸಂಪತ್ ಕುಮಾರ್ ಮತ್ತು ವಿಠ್ಠಲ್. ಇವರಿಬ್ಬರ ಪರಿಚಯ ಆಯ್ತು ನನಗೆ, ಸಂಪತ್ ಕುಮಾರ್ ಅವರು ನನಗೆ ಪರಿಚಯ ಆದಮೇಲೆ ಅವರಿಗೆ ಒಂದು ಮಾತು ಹೇಳಿದೆ, ನಾನು ಕೂಡ ಕವಿತೆ ಕತೆ ಸಾಹಿತ್ಯ ಇವೆಲ್ಲ ಬರುಯುತ್ತೇನೆ ಅಂತ ಹೇಳಿದೆ. ಒಬ್ಬರು ನನ್ನ ಫ್ರೆಂಡ್ ಇದ್ದಾರೆ, ಅವರ ನಂಬರ್ ಕೊಡ್ತೀನಿ ಮಾತನಾಡು ಅಂತ ಸಂಪತ್ ಕುಮಾರ್ ಅವರು ಹೇಳಿದರು.....


ಅವಾಗ ಕಲ್ಲೇಶ್ ಎಂಬ ಸ್ನೇಹಿತ ಪರಿಚಯವಾಯಿತು ತುಂಬಾ ವರ್ಷ ಸ್ನೇಹ ಬೆಳೆಯಿತು. ಒಂದು ಸಿನಿಮಾ ಮಾಡಬೇಕು ಅಂತ ಆಸೆಯಿಟ್ಟುಕೊಂಡು ಮತ್ತೆ ಜರ್ನಿ ಪ್ರಾರಂಭವಾಯಿತು.  ಆಗ ಬಂದಿದ್ದೇ  "ನೆಲೆ" ಎಂಬ ಕಿರುಚಿತ್ರ, ಅದು ಕೂಡ ಸೆಕ್ಸಸ್ ಆಯ್ತು. ಕಿರುಚಿತ್ರ  ಮುಗಿದ ಮೇಲೆ  ಎರಡು ತಿಂಗಳಿಗೆ ಆಫರ್ ಗಳು ಬಂದವು, ಸಂಭಾಷಣೆ ಬರೆದುಕೊಳ್ಳೋಕೆ ಮತ್ತು ಲಿರಿಕ್ಸ್ ಬರೆದು ಕೊಡೋಕೆ, ಒಂದರ ಮೇಲೊಂದು ಆಫರ್ ಗಳು ಬಂದವು. ಅಲ್ಲಿಂದ ಮತ್ತೆ ಸ್ಟಾರ್ಟ್ ಆಯ್ತು ನನ್ನ ಸಿನಿ ಪಯಣ...


ಸಿ.ಎಸ್.ದಿನೇಶ್ ಒಂಟಿಸಲಗ

Send your writings and any onther news to SRkannada2104@gmail.com