ಬಿಗ್ ಬಾಸ್ ಕನ್ನಡ ಸೀಜನ್ 8 ಲಾಕ್ ಆಗೋರು ಯಾರ್ಯಾರು???
ಅಂದ ಹಾಗೇ ಇನ್ನು ನಾಲ್ಕು ದಿನಗಳಲ್ಲಿ ಕನ್ನಡದ ಪ್ರಖ್ಯಾತ ರಿಯಾಲಿಟಿ ಶೋ ಬಿಗ್ಬಾಸ್ ಕನ್ನಡದ 8ನೇ ಸೀಜನ್ ಆರಂಭಗೊಳ್ಳಲಿದೆ.
ಈ ಬಾರಿ ಲಾಕ್ ಡೌನ್ ಮುಗಿಸಿ ಮತ್ತೊಂದು ಲಾಕ್ ಡೌನ್ ಮಾಡಿಕೊಂಡು ಲಾಕ್ ಆಗ್ತಾ ಇರೋರು ಯಾರು ಎಂಬ ಪ್ರಶ್ನೆ ಎಲ್ಲ ಕನ್ನಡಿಗರಿಗೂ ಈಗ ಕುತೂಹಲ ಮೂಡಿಸಿದೆ.
ಎಲ್ಲರಿಗೂ ತಿಳಿದಿರುವಂತೆ ಈಗಾಗಲೇ ಈ ಶೋನ 2 ಪ್ರೋಮೋ ಸೋಷಿಯಲ್ ಮೀಡಿಯಾ ತುಂಬೆಲ್ಲಾ ಹರಿದಾಡುತಿದ್ದು, ಮೊದಲನೇ ಪ್ರೋಮೋದಲ್ಲಿ ಸೀಜನ್ ಎಂಟರ ಆರಂಭದ ಸುಳಿವಿದ್ದರೆ, ಎರಡನೇ ಪ್ರೋಮೋದಲ್ಲಿ ಅದರ ಆರಂಭದ ದಿನಾಂಕವನ್ನು ಕೂಡಾ ಬಹಿರಂಗಗೊಳಿಸಿದ್ದಾರೆ.
28ರ ಭಾನುವಾರ ಸಂಜೆ 6:30ಕ್ಕೆ ಆರಂಭವಾಗುವ ಈ ಶೋನಲ್ಲಿ ಯಾರೆಲ್ಲಾ ಸ್ಪರ್ಧಿಸುತಿದ್ದಾರೆ ಎಂಬುದರ ಬಗ್ಗೆ ಎಲ್ಲೂ ಮಾಹಿತಿ ಬಿಟ್ಟುಕೊಡದ ವಾಹಿನಿ, ಆದರೆ ಈ ಬಾರಿ ಕೇವಲ ಸೆಲೆಬ್ರಿಟಿಗಳು ಮಾತ್ರ ಸ್ಪರ್ಧಿಗಳಾಗಿರುತ್ತಾರೆ ಎಂಬುದು ಜನರ ಅಭಿಪ್ರಾಯವಾಗಿದೆ.
ಅಗ್ನಿಸಾಕ್ಷಿ ಧಾರವಾಹಿಯ ಮುಖ್ಯಭೂಮಿಕೆಯಲ್ಲಿ ನಟಿಸುತಿದ್ದ ವೈಷ್ಣವಿ ಅವರು ಬರುವುದಾಗಿ ಕೆಲ ಸುದ್ದಿ ಹರಿದಾಡುತಿತ್ತು, ಆದರೆ ಅವರ ಅಭಿಮಾನಿಗಳಿಗೆ ಅವರೇ ತಾನು ಬರುವುದಿಲ್ಲ ಸಿನಿಮಾದ ಚಿತ್ರಿಕರಣದಲ್ಲಿದ್ದೇನೆಂದು ತಿಳಿಸಿದ್ದು,
ಇನ್ನು ಬ್ರಹ್ಮಗಂಟು ಧಾರವಾಹಿಯ ಗೀತಾ ಭಾರತಿ ಭಟ್ ಬರುತಿದ್ದಾರೆ ಎಂಬ ಸುದ್ದಿಯೂ ಕೂಡಾ ಬಂದಿದೆ, ಆದರೆ ಈ ಬಗ್ಗೆ ಅವರು ಯಾವ ಪ್ರತಿಕ್ರೆಯೆ ಕೂಡಾ ನೀಡಿರುವುದಿಲ್ಲ. ಒಟ್ಟಿನಲ್ಲಿ ಒಂದು ಲಾಕ್ಡೌನ್ ನಂತರ ಸ್ಪರ್ಧಿಗಳು ಮತ್ತೊಂದು ಲಾಕ್ಡೌನ್ ಗಾಗಿ ಹೊರಟಿರುವುದು ನಮ್ಮ ಮನೋರಂಜನೆಗಾಗಿ ನಮ್ಮ ಮನೆಗೆ ಬರಲು ತಯಾರಾಗಿದ್ದಾರೆ.

