ನಿಮ್ಮ ಸಹಕಾರದ ನಿರೀಕ್ಷೆಯಲ್ಲಿ ನಿಮ್ಮ ವಿಕ್ಕಿ ಶೆಟ್ಟಿ ಬೆದ್ರ.
*ನಿಮ್ಮ ಸಹಕಾರದ ನಿರೀಕ್ಷೆಯೊಂದಿಗೆ ನಾನು ನಿಮ್ಮ ವಿಕ್ಕಿ ಶೆಟ್ಟಿ ಬೆದ್ರ*
ವಾಚ್ ಮ್ಯಾನ್ ಕೆಲಸದಲ್ಲಿರುವ ತಂದೆ, ಗೃಹಿಣಿ ತಾಯಿ. ಚಿಕ್ಕದಾದ ಸಂತೋಷದ ಚಿಲುಮೆ ಆಗಿದ್ದ ಈ ಕುಟುಂಬಕ್ಕೆ ಕೆಲವು ತಿಂಗಳುಗಳಿಂದ ತಮ್ಮ 7 ವರ್ಷದ ಮಗುವಿಗೆ ಕಾಡುವ ವಿಪರೀತ ಜ್ವರ ಬರಸಿಡಿಲಿನಂತೆ ಎಗರಿದೆ. ಎಲ್ಲರ ಕಣ್ಮಣಿಯಾಗಿದ್ದ ಈ ಕಂದಮ್ಮ ಬಿಡದೆ ಕಾಡುವ ಅನಾರೋಗ್ಯದಿಂದ ಕಂಗಾಲಾಗಿದ್ದಾನೆ.
ಮಗುವನ್ನು ದೇರಳಕಟ್ಟೆ , ನಿಟ್ಟೆ ಆಸ್ಪತ್ರೆ, ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದರು. ಪ್ರಸ್ತುತ ಅತ್ತಾವರದ KMC ಆಸ್ಪತ್ರೆಯಲ್ಲಿರುವ ಈ ಮಗು *H.L.H (hemophagocytic lymphohistocytosis)* ಎಂಬ ವಿಚಿತ್ರ ಖಾಯಿಲೆಯಿಂದ ಬಳಲುತ್ತಿದ್ದಾನೆ.
ಮಗುವಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯ ಇರುವುದರಿಂದ KMC ವೈದ್ಯರ ನಿದರ್ಶನದಂತೆ ಮಗುವನ್ನು *"ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯಲ್ಲಿರುವ ಮಂಜೂದಾರ್ ಷಾ ಕ್ಯಾನ್ಸರ್ ಆಸ್ಪತ್ರೆಗೆ"* ಕರೆದುಕೊಂಡು ಹೋಗಿದ್ದು ಅಲ್ಲಿ ನ ಉನ್ನತ ವೈದ್ಯರು *ಮೂಳೆ ಅಸ್ಥಿಮಜ್ಜೆ ಕಸಿ (Bone Marrow transplant)* ಮಾಡಲು ಸೂಚಿಸುತ್ತಾರೆ.
ಈ ಚಿಕಿತ್ಸೆಗೆ ಅಂದಾಜು 45 ಲಕ್ಷ ರೂಪಾಯಿ ಖರ್ಚಾಗುವ ಸಾಧ್ಯತೆ ಇದ್ದು ಈ ಮೊತ್ತವನ್ನು ಭರಿಸಲು ಕುಟುಂಬವು ಆಶಕ್ತವಾಗಿರುವುದರಿಂದ , *ನಮ್ಮ ತುಳುನಾಡ್ ಟ್ರಸ್ಟ್ (ರಿ)ಯ ಆಶಿಸಾ ನಿಧಿ ಯೋಜನೆ* ಮತ್ತು ಆತ್ಮೀಯರ ಸಹಕಾರದೊಂದಿಗೆ *ದಿನಾಂಕ 19/02/2021 ಶುಕ್ರವಾರ ಸಂಜೆಯಿಂದ 22/02/2021 ಆದಿತ್ಯವಾರ*ದವರೆಗೆ *ಪೊಳಲಿ ತಾಯಿಯ ಸನ್ನಿಧಾನದಲ್ಲಿ* ನಡೆಯುವ ಕಲಶಾಭಿಷೇಕದಂದು ಮಗುವಿಗಾಗಿ / ಮಗುವಿನ ಚಿಕಿತ್ಸೆಗಾಗಿ ಹೊಸ ಅವತಾರ ( ಹೊಸವೇಷ)ದಲ್ಲಿ ನಾನು ನಿಮ್ಮ ಮುಂದೆ ಬರಲಿದ್ದೇನೆ. ಕ್ಷೇತ್ರದ ಉತ್ಸವಕ್ಕೆ ಆಗಮಿಸುವ ಭಕ್ತಾದಿಗಳು ಈ ಅಭಿಯಾನದಲ್ಲಿ ಪಾಲ್ಗೊಂಡು ಪುಟ್ಟ ಕಂದಮ್ಮನ ಚಿಕಿತ್ಸೆಗೆ ನೆರವಾಗಬೇಕು ಎಂದು ವಿನಂತಿ.
***********************
*"ನಾವು ಇಡುವ ಪ್ರತಿ ಹೆಜ್ಜೆಗೂ ಹೊನ್ನ ಮಳೆ ಸುರಿಸಿ ಬೆನ್ನೆಲುಬಾಗಿ ನಿಲ್ಲುವ ಎನ್ನ ಹೃದಯ ಗದ್ದುಗೆಯ ಒಡತಿ ಅಮ್ಮ ಜ್ಯೊತಿರ್ಮಾತೃ ಸ್ವರೂಪಿಣಿಯನ್ನ ನೆನೆಯುತ್ತ, ಪೊಳಲಿಯ ಒಡತಿಯಲ್ಲಿ ಅನುಮತಿ ಬೇಡುತ್ತ ನಿಮ್ಮ ಮುಂದೆ ಮಗುವಿನ ನೆರವಿಗಾಗಿ ಸಹಾಯ ಬೇಡುತ್ತ ನಿಮ್ಮ ಮುಂದೆ ಬರುತ್ತಿದ್ದೇನೆ.*
*ಹರಸಿ - ಹಾರೈಸಿ ನೆರವಾಗಿ ಎಂಬ ವಿನಂತಿ ನಮ್ಮದು"*
ಇಂತಿ ನಿಮ್ಮವ...
*ವಿಕ್ಕಿ ಶೆಟ್ಟಿ ಬೆದ್ರ*



