ಎಲ್ಲಾ ಜೀವಿಗಳಿಗೂ ಬದುಕಲು ಸಮಾನ ಹಕ್ಕು ಕೊಟ್ಟವರು ಈ ಜೀವವನ್ನೇಕೆ ಅದರಿಂದ ತೆಗೆದುಹಾಕಿಬಿಟ್ಟರು!!???


ಜಗತ್ತಿನ ಎಲ್ಲಾ ಜೀವಿಗಳಿಗೂ ಬದುಕುವ ಸಮಾನ ಹಕ್ಕು ಕೊಟ್ಟಿತು ಸಂವಿಂಧಾನ. ಎಲ್ಲಾ ಪ್ರಾಣಿಗಳನ್ನೂ ಸೇರಿಸಿತು, ಮರಗಳನ್ನೂ ಕಡಿಯುವುದಕ್ಕೆ ಕಡಿವಾಣ ಹಾಕಿತು, ಇವೆಲ್ಲದರ ನಡುವೆ ಸ್ವಾತಂತ್ರ್ಯ ಸಿಗದೇ ಇಂದಿಗೂ ಗಲ್ಲಿ,ಬೀದಿ, ಹಳ್ಳಿ, ನಗರಗಳಲ್ಲಿ ಮುಲಾಜಿಲ್ಲದೆ ರಾಕ್ಷಸರ ಕೈಗೆ ಸಿಕ್ಕವಳು ಹೆಣ್ಣು!!!

ಇಷ್ಟಕ್ಕೂ ಅವಳೇನೂ ಯಾತಕ್ಕಾಗಿ ನಗರದ ತೊಟ್ಟಿಯಲ್ಲೆಸೆದ ತ್ಯಾಜ್ಯದಂತೆ ಕಂಡಳೋ ತಿಳಿದಿಲ್ಲ. ಜೀವ ಕೊಟ್ಟವಳು ಅವಳು, ಜೀವನ ಕೊಟ್ಟವಳು ಅವಳು, ನಡೆಯಲು, ನಗಲು ಕಲಿಸಿದವಳು ಅವಳು, ಸ್ನೇಹಿತೆಯಾಗಿ ಹೆಗಲು ಕೊಟ್ಟವಳು ಅವಳು, ಅಕ್ಕನಾಗಿ ಕಾಳಜಿ ತೋರಿಸಿದವಳು ಅವಳು, ತಂಗಿಯಾಗಿ ಸುಮಧುರ ನೆನಪುಗಳನ್ನು ಕೊಟ್ಟವಳು ಅವಳು ಆದರೆ ಬೆಳೆದು ನಿಂತಾಗ ಅವಳು ಕಣ್ಣಿಗೆ ಅಂದವಾಗಿ ಕಾಣಲಿಲ್ಲ, ಅವಳು ತಾಯಿಯಾಗಿ ಕಾಣಲಿಲ್ಲ, ಅವಳು ಅಕ್ಕನಾಗಿ ಕಾಣಲಿಲ್ಲ, ತಂಗಿಯಾಗಿ ಕಾಣಲಿಲ್ಲ.. ಅವಳೊಬ್ಬಳು ಸೆಕ್ಸಿಯಾಗಿ ಕಂಡಳು..


ಇತ್ತೀಚಿಗಂತೂ ಸ್ವಂತವಲ್ಲದಿದ್ದರೂ ರಾಖಿ ಕಟ್ಟಿದ ಕೈಗಳನ್ನು ರಾಖಿ ಕಟ್ಟಿಸಿಕೊಂಡ ಕೈಗಳೇ ಮಂಚಕ್ಕೆಳೆದು ಹಂಚಿ ತಿಂದ ಘಟನೆಗಳೂ ಕಣ್ಣ ಮುಂದಿವೆ. ಪ್ರೀತಿಗೆ ಕಣ್ಣಿಲ್ಲ ಎಂಬ ಮಾತಿತ್ತು, ಆದರೆ ಇಂದು ಕಾಮಕ್ಕೆ ಕಣ್ಣಿಲ್ಲದಂತಾಗಿದೆ. 


ಇಷ್ಟಕ್ಕೂ ಅವಳ ತಪ್ಪೇನು???
ಹೆಣ್ಣಾಗಿ ಹುಟ್ಟಿರುವುದಾ??
ಅಣ್ಣ ತಮ್ಮನೆಂದು ನಂಬಿಕೆಯ ನಗು ಬೀರಿದ್ದಾ??
ತಮ್ಮವರೆಂದು ಒಳ್ಳೆಯ ಮಾತಾನ್ನಾಡಿದ್ದಾ??


ಅವಳು ಹೇಗಿದ್ದರೂ ಎಂದಿಗೂ ನಮ್ಮ ಕಣ್ಣಲ್ಲಿ ಒಳ್ಳೆಯ ಆಲೋಚನೆ ಬಾರದೇ???
ಅವಳ ಕುರಿತಾಗಿ ಧ್ವನಿ ಎತ್ತಬೇಕಾಗಿರುವವರು ಎಲ್ಲಿದ್ದಾರೆ??
ಅವಳಿಗೆ ನ್ಯಾಯ ಕೊಡಿಸುವ ಭಾಷಣಕಾರರು ಎಲ್ಲಿ ಮಲಗಿದ್ದಾರೆ??
ಗಲ್ಲುಶಿಕ್ಷೆ ಹತ್ತು ಅತ್ಯಾಚಾರಿಗಳಿಗೆ ಕೊಟ್ಟು ನೋಡಿ ನಂತರ ಸಮಾಜ ತನ್ನಿಂತಾನೇ ಬದಲಾಗುವುದು...

Connect SR Kannada with SRkannada2104@gmail.com