Zee ಕಾಮಿಡಿ ಕಿಲಾಡಿಗಳು ಖ್ಯಾತಿಯ ದಿವ್ಯ ಅಂಚನ್ ಜೀವನದ ಯಶೋಗಾಥೆ.
"ಕತ್ತಲಾಗದೆ ನಕ್ಷತ್ರಗಳನ್ನು ಕಾಣಲು ಸಾಧ್ಯವಿಲ್ಲ.ಕಷ್ಟವಿಲ್ಲದೆ ಜೀವನ ನಡೆಯೋದಿಲ್ಲ.ಏಳು-ಬೀಳಿನ ನಡುವೆ ಬಾಳ ತೇರು ಸಾಗಲು ಸಾವಿರ ಮುಳ್ಳುಗಳಿದ್ದರು ಅದರ ನಡುವೆ ಗುಲಾಬಿಯಂತೆ ಮಿಂಚಬೇಕು ಅದುವೇ ನಿಜವಾದ ಸಾಧನೆ. ಕಷ್ಟ-ಸುಖ ಎರಡು ಸನ್ನಿವೇಶಗಳಲ್ಲು ನಗುತ್ತ ಬೇರೆಯವರನ್ನು ನಗಿಸುತ್ತ ಜೀವನ ಕಳೆಯುವುದೆ ನಿಜವಾದ ಕಲಾವಿದನ ಬದುಕು.ಅಂತಹ ಕಲಾವಿದರಲ್ಲಿ ನಮ್ಮ ಕಾಮಿಡಿ ಕಿಲಾಡಿ ಖ್ಯಾತಿಯ ದಿವ್ಯ ಅಂಚನ್ ಕೂಡ ಒಬ್ಬರು.ಸಣ್ಣ ವಯಸ್ಸಿನಲ್ಲಿ ಸಾಧನೆಯ ಪರ್ವತವನ್ನು ಎರುತ್ತಿರುವ ಸಾಧಕಿ.
ಕಲ್ಲನ್ನು ಕೆತ್ತಿದಾಗ ಮಾತ್ರ ಅದು ಸುಂದರವಾದ ಶಿಲ್ಪವಾಗುತ್ತದೆ.ಹಾಗೆಯೇ ಕಷ್ಟಗಳನ್ನು ಮೀರಿ ನಿಂತು ಅತ್ಯುತ್ತಮ ಕನಸು ಕಂಡು ನನಸು ಮಾಡಲು ಹೊರಟಾಗ ಮಾತ್ರ ಅದು ಶ್ರೇಷ್ಠ ಸಾಧನೆಗೆ ದಾರಿಯಾಗುತ್ತದೆ.ಈ ರೀತಿಯ ಸಾಧನೆಯ ಹಾದಿಯಲ್ಲಿ ನಡೆಯುವವರು ನಮ್ಮ ಈ ಸಾಧಕಿ.
ದಿವ್ಯ ಅವರು 19/5/2000 ರಂದು ಬೆಳ್ತಂಗಡಿ ತಾಲ್ಲೂಕಿನ ಗುಂಡೂರಿ ಗ್ರಾಮದ ಭಾರತಿ ಹಾಗೂ ಮಾಧವ ಪೂಜಾರಿ ದಂಪತಿಯ ಮಗಳಾಗಿ ಜನಿಸಿದರು.ಇವರು ಬಜಿರೆಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣ ವೇಣೂರಿನಲ್ಲಿ ಮುಗಿಸಿದ ಇವರು ಪ್ರಸ್ತುತ ಪ್ರಥಮ ದರ್ಜೆ ಕಾಲೇಜು ಸಿದ್ಧಕಟ್ಟೆಯಲ್ಲಿ ಅಂತಿಮ ವರುಷದ ವಾಣಿಜ್ಯ ವಿದ್ಯಾರ್ಥಿನಿಯಾಗಿ ಕಲಿಯುತ್ತಿದ್ದಾರೆ.
ತೀರ ಬಡತನದಲ್ಲಿ ಬೆಳೆದ ಇವರು ತನ್ನ ವಿದ್ಯಾಭ್ಯಾಸ ಹಾಗೂ ಕುಟುಂಬದ ನಿರ್ವಹಣೆಗಾಗಿ ಹೂ ಕಟ್ಟಿ ಮಾರಾಟ ಮಾಡಿ,ಟೈಲರ್ ಕೆಲಸ ಮಾಡುತ್ತ,ಬೇರೆಯವರ ಮನೆಯಲ್ಲಿ ಕೆಲಸ ಮಾಡಿ ಸಾಧನೆಯ ದಾರಿಯಲ್ಲಿ ಮುನ್ನಡೆದ ಹೆಮ್ಮೆಯ ಸಾಧಕಿ.ಇವರನ್ನು ಕಂಡಾಗ ನೆನಪಾಗಾವುದು ಒಂದೇ ಸಾಧನೆ ಎಂಬುದು ಸಾಧಕನ ಸ್ವತ್ತೆ ಹೊರತು ಸೋಮಾರಿಯ ಸ್ವತ್ತಲ್ಲ ಎಂಬ ಹಿತನುಡಿ..
ಹಣೆ ಬರಹ ದೇವರು ಕೊಟ್ಟ ಪೀಠಿಕೆ ಆದರೆ ಪರಿಶ್ರಮ ಇದ್ದಾಗ ಮಾತ್ರ ಉತ್ತಮ ಅಧ್ಯಾಯಗಳು ಸೃಷ್ಟಿಯಾಗಲು ಸಾಧ್ಯ.ಸಾಧನೆಯ ಹಾದಿಯಲ್ಲಿ ಕಷ್ಟಗಳನ್ನು ಎದುರಿಸಿ ಮುಂದುವರೆದಾಗ ಮಾತ್ರ ಸಾಧನೆಗೆ ನಿಜವಾದ ಅರ್ಥ ಸಿಗಲು ಸಾಧ್ಯ.ನಮ್ಮ ಈ ಪ್ರತಿಭೆಯ ಸಾಧನೆಯ ಪುಟಗಳನ್ನು ಒಮ್ಮೆ ತಿರುವಿ ನೋಡಿದಾಗ ಬಾಲ್ಯದ ದಿನಗಳಲ್ಲಿ ನಟನೆ,ನೃತ್ಯ,ನಾಟಕಗಳಲ್ಲಿ ಆಸಕ್ತಿ ಹೊಂದಿದ್ದ ಇವರು ಅವಕಾಶಕ್ಕಾಗಿ ಕಾಯುತ್ತಿದ್ದಾಗ ಸೀಸನ್ 1 ಕಾಮಿಡಿ ಕಿಲಾಡಿ ಖ್ಯಾತಿಯ ಅನೀಶ್ ಪೂಜಾರಿ ವೇಣೂರು ಸಾರಥ್ಯದ ವೇಣೂರಿನ ಹೆಮ್ಮೆಯ ಕಲಾಕಾರ್ ಎಂಬ ಸಂಸ್ಥೆಯೊಂದಿಗೆ ಸೇರಿ ನೃತ್ಯ ನಾಟಕಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡರು.ಡ್ಯಾನ್ಸ್ ಮಾಸ್ಟರ್ ಚೇತನ್ ಜೈನ್ ಹಾಗೂ ನಟನ ತರಬೇತುದಾರ ಅನೀಶ್,ಸ್ಮಿತೇಶ್ ಎಸ್ ಬಾರ್ಯ ಇವರಿಂದ ತರಬೇತಿ ಪಡೆದು ಅನೇಕ ಸ್ಟೆಜ್ ಗಳಲ್ಲಿ ಡ್ಯಾನ್ಸ್ ಶೋಗಳನ್ನು, ಸಾಮಾಜಿಕನಾಟಕಗಳನ್ನು, ರಂಗನಾಟಕಗಳನ್ನು ಮಾಡಿ ಜನರಿಂದ ಸೈ ಅನಿಸಿಕೊಂಡರು.ಇನ್ನು ಇವರ ಕಾಮಿಡಿ ಕಿಲಾಡಿ ಪ್ರೊಗ್ರಾಮ್ ಬಗ್ಗೆ ತಿಳಿಯುವುದದರೆ ಕಾಮಿಡಿ ಕಿಲಾಡಿ ಮೊದಲ ಹಂತದ ಆಡಿಶನ್ ಮುಗಿಸಿ ದ್ವಿತೀಯ ಆಡಿಶನ್ ಗೆ ಬೆಂಗಳೂರಿಗೆ ಹೋದ ಸಂದರ್ಭದಲ್ಲಿ ಇವರ ತಾಯಿ ಅನಾರೋಗ್ಯದಿಂದಾಗಿ ಮರಣವನ್ನು ಹೊಂದುತ್ತಾರೆ.ಇದು ಇವರಿಗೆ ತುಂಬಲಾರದ ದುಃಖವಾದರು ಅನೀಶ್ ಪೂಜಾರಿಯವರ ಮತ್ತು ಕಲಾಕಾರ್ ಟೀಮ್ ಇವರಿಗೆ ನೀಡಿದ ಪ್ರೋತ್ಸಾಹದಿಂದ ದಿವ್ಯ ಅಂಚನ್ ಅವರು ಕಾಮಿಡಿ ಕಿಲಾಡಿ ಸೀಸನ್ 3 ಗೆ ಆಯ್ಕೆಯಾಗುತ್ತರೆ.
ಕಾಮಿಡಿ ಕಿಲಾಡಿ ಪ್ರಥಮ ಸ್ಕಿಟ್ ನಲ್ಲಿ ನವರಾಸ ನಾಯಕ ಜಗ್ಗೇಶ್ ಅವರಿಂದ ಬೇಷ್ ಎನಿಕೊಂಡರು.ನಂತರ ಎಲ್ಲ ತೀರ್ಪುಗಾರಿಂದ ಸೈ ಅನಿಸಿಕೊಂಡು ಗ್ರ್ಯಾಂಡ್ ಫಿನಾಲೆ ಹಂತಕ್ಕೆ ತಲುಪಿ ಕರ್ನಾಟಕದ ಜನರ ಮನೆ ಮಗಳಾಗಿ ಕೀರ್ತಿ ಪಡೆಯುತ್ತಾರೆ."ನೋವುಗಳು ನಾಳೆಗಳಿದ್ದಂತೆ ಬರುತ್ತಲೇ ಇರುತ್ತದೆ. ಎದುರಿಸಿ ನಡೆಯಬೇಕು ಅಷ್ಟೇ ಸಂತೋಷಗಳು ಹಬ್ಬಗಳಂತೆ ಬಂದ ಕ್ಷಣ ಅನುಭವಿಸಬೇಕು.ಎಂಬ ಹಿತನುಡಿಯೊಂದಿಗೆ ಸಾಧನೆಯ ಹಾದಿಯಲ್ಲಿ ಕಷ್ಟಗಳು ದೂರವಾಗಿ ಸುಖದ ಪಣಯಣ ನಿಮ್ಮದಾಗಲಿ ಎಂದು ಹಾರೈಸುತ್ತಾ..ಈ ನಮ್ಮ ಹೆಮ್ಮೆಯ ಪ್ರತಿಭೆಯನ್ನು ನಿಮ್ಮ ಮಡಿಲಿಗೆ ಹಾಕುತ್ತ ಈ ಪ್ರತಿಭೆಯನ್ನು ಉಳಿಸಿ ಬೆಳೆಸಿ ಇನಷ್ಟು ಅವಕಾಶ ನೀಡಿ ಪ್ರೋತ್ಸಾಹಿಸಿ ಎಂಬುವುದೇ ಆಶಯ.

