ತುಳುನಾಡ ಗಾನ ಗಂಧರ್ವನ ಯಶೋಗಾಥೆಯಿದು..


"ಇದು ಕಲಿಯುಗ ಮರಿ ಇಲ್ಲೇನಿದ್ರು ಹಾಡೋದಿಕ್ಕೆ ಪಾರ್ಟಿ ಬೇಕು, ಕುಣಿಯೋದಿಕ್ಕೆ ಡಿಜೆ ಹಾಡು ಬೇಕು" ಅನ್ನೋರು ಇವಾಗಿನ ಜನರು. ದಿನೇ ದಿನೇ ಆಧುಣೀಕರಣಗೊಳ್ಳುತ್ತಿರುವ ಜನ, ಸಮಾಜ ಹೀಗೆ ಅವೆಲ್ಲದರ ನಡುವೆ ಬೆರೆತು ನಾವೂ ಆಧುಣೀಕರಣಗೊಂಡಿದ್ದೇವೆ. ಇವೆಲ್ಲದರ ನಡುವೆ ನಮ್ಮ ಸಂಸ್ರೃತಿ, ಆಚಾರ, ವಿಚಾರ ಇನ್ನೇನು ಮರೆತೇ ಬಿಡುತಿದ್ದೇವೆ ಎಂದಾಗ ದಾಸ ಸಾಹಿತ್ಯವನ್ನು ಎತ್ತಿ ಹಿಡಿದು, ಅವುಗಳಿಗೊಂದು ಹೊಸ ರೂಪ ಕೊಟ್ಟು, ಅವುಗಳನ್ನು ಪುನರ್ಜೀವನಗೊಳಿಸಿ ನಮ್ಮ ಮುಂದೆ ತಂದಿಟ್ಟ ನಮ್ಮ ಹೆಮ್ಮೆಯ ಪುತ್ತೂರಿನ ಸಾಧಕ ಜಗದೀಶ್ ಆಚಾರ್ಯ ಪುತ್ತೂರು...



ಎಲ್ಲೋ ಒಂದೆಡೆ ಹೊಸತನ್ನೇ ಆರಿಸುತ್ತಾ ಸಾಗುವ ನಮಗೆ ಹಳೆಯದಕ್ಕೆ ಪ್ರಾಮುಖ್ಯತೆ ಕೊಡಬೇಕೆಂದು ಅನ್ನಿಸೋದೆ ಇಲ್ಲ. ಇದನ್ನು ಮನವರಿತ ಸಂಗೀತ ಪ್ರೇಮಿ, ಹಳೆಯ ಸಾಹಿತ್ಯಕ್ಕೆ ಹೊಸ ರಾಗದ ಬೆಸುಗೆ ಬೆಸೆದು, ಅದಕ್ಕೆ ಹೊಸ ಶ್ರೃತಿ, ತಾಳ ಬೆರೆಸಿ, ಹೊಸದಾಗಿ ನಮ್ಮ ಮುಂದೆ ಇಟ್ಟಾಗ ಕರುನಾಡೇ ಮನಸೋತಿತು. ಅವರನ್ನು ಅನುಸರಿಸಿತು, ಕೊನೆಗೇ ಗಾನಗಂಧರ್ವನೆಂದೇ ಬಿರುದು ಕೊಟ್ಟಿತು. ಎಲ್ಲೋ ಜಗದ ಒಂದು ಮೂಲೆಯಲ್ಲಿ ಜನಿಸಿ, ತನ್ನ ಕಠಿಣ ಪರಿಶ್ರಮದೊಂದಿಗೆ ತನ್ನ ಜೊತೆ ಆ ಊರಿನ ಹೆಸರನ್ನು ಮೇಲಕೆತ್ತುವವನು ಒಬ್ಬ ಮಹಾನ್ ಸಾಧಕ. 


ಗೋಪಾಲಕೃಷ್ಣ ಮತ್ತು ವಾರಿಜಾ ಆಚಾರ್ಯ ದಂಪತಿಗಳ ಪುತ್ರನಾದ ಇವರು ಜನಿಸಿದ್ದು ಪುತ್ತೂರಿನಲ್ಲಿ. ಶಿಕ್ಷಣ ಬಿಇಎಮ್ ಮಂಜಲ್ಪಡ್ಪು,  ನೆಹರೂ ನಗರ ಪುತ್ತೂರು ಇಲ್ಲಿ. ಮುಂದೆ ಜೂನಿಯರ್ ಕಾಲೇಜು ಕೊಂಬೆಟ್ಟಿನಲ್ಲಿ ತಮ್ಮ ಶೈಕ್ಷಣಿಕ ಬದುಕನ್ನು ಮುಂದುವರೆಸಿದರು. ಶಾಲಾ ಕಾಲೇಜಿನ ದಿನಗಳಲ್ಲಿ ಇದ್ದದ್ದು ಚಿತ್ರಕಲಾ ಪ್ರತಿಭೆಯಾಸಕ್ತಿ. ಆ ದಿನಗಳಲ್ಲಿ ರಾಜ್ಯ ಮಟ್ಟದಲ್ಲೂ ಸ್ಪರ್ಧಿಸಿದವರು. ತದನಂತರ ಗೋಪಿಕಾ ಆರ್ಟ್ಸ್ ಬದುಕು ಕಟ್ಟಿಕೊಳ್ಳಲು ಜೀವಿಸತೊಡಗಿದ ಮನೆ. ಇದರ ಜೊತೆಗೆ ತಮ್ಮೊಳಗೆ ಸುಪ್ತವಾಗಿದ್ದ ಮತ್ತೊಂದು ಕಲೆ ಸಂಗೀತ ಕಲೆ ನಿಧಾನಕ್ಕೆ ಬೆಳೆಯಲಾರಂಭಿಸಿತು. 


ಈ ಜೂನಿಯರ್ ಯೇಸುದಾಸ್ ಬಾಲ್ಯದಲ್ಲಿಯೇ ಅನೇಕ ವೇದಿಕೆಗಳಲ್ಲಿ ಹಾಡನ್ನು ಹಾಡಿ ಭೇಷ್ ಎಂದೆನಿಸಿಕೊಂಡವರು. ಪ್ರಶಸ್ತಿಗಳನ್ನು ಬಾಚಿ ತಬ್ಬಿಕೊಂಡವರು. "ಕಲಾಸಿಂಧು ಬಳಗ"ವೆಂಬ ಸಂಗೀತ ಸಾಧಕರ ಗುಂಪನ್ನು ಕಟ್ಟಿ ದೇಶ ವಿದೇಶಗಳಲ್ಲಿ ತಮ್ಮ ಗಾಯನದ ಸೊಬಗನ್ನು ತೋರಿದವರು. ಇದರ ಜೊತೆಗೆ ಸಾಹಿತ್ಯ ಬರೆದು, ರಾಗ ಸಂಯೋಜನೆ ಮಾಡಿ, ತಾನೇ ಸ್ವರವಾಗಿ ಜನ ಮನಗಳಲ್ಲಿ ಕುಳಿತು, ಅಭಿಮಾನಿ ಬಳಗವನ್ನೇ ಪಡೆದವರು. 


ಅನೇಕ ಮಾಧ್ಯಮಗಳಲ್ಲಿ ತಮ್ಮ ಗಾಯನದ ಗಾಳಿಯನ್ನು ಪಸರಿಸಿದ ಇವರು ಕರ್ನಾಟಕದ ಪ್ರಖ್ಯಾತ ಮಾಧ್ಯಮಗಳಾದ ಕಲರ್ಸ್ ಕನ್ನಡ ಸೇರಿದಂತೆ ಕರಾವಳಿ ಮಾಧ್ಯಮಗಳಾದ ಕಹಳೆ, ದಾಯ್ಜಿವರ್ಡ್ ಮುಂತಾದವುಗಳಲ್ಲಿಯೂ ತಮ್ಮ ಸಂಗೀತ ಮಾಧುರ್ಯ ಸವಿಯುಣಿಸಿದ್ದಾರೆ. 

ಮಾತೃಭಾಷೆ ತುಳುವಿನ ಜೊತೆಗೆ ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ತನ್ನ ಸ್ವರವನ್ನು ಹಂಚಿ ಸಂಭ್ರಮಗೊಳಿಸಿದವರು. ಸಾವಿರಾರು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿರುವ ಇವರು ಗುರುಪುರ ವಜ್ರದೇಹಿ ಮಠದ ಸ್ವಾಮಿಗಳಿಂದ "ಗಾನ ಮಾಂತ್ರಿಕ" ಎಂಬ ಬಿರುದು ನೀಡಿ ಬಂಗಾರ ಪದಕದೊಂದಿಗೆ ಸನ್ಮಾನಿಸಿರುದಲ್ಲದೇ, ಚಿಂತನಶ್ರೀ ನವದುರ್ಗಾ ಮಂತ್ರಮೂರ್ತಿ ಕ್ಷೇತ್ರದಿಂದಲೂ "ಸ್ವರ ಲಾಲಿತ್ಯ ಪ್ರವೀಣ" ಬಿರುದು ನೀಡಿ ಬಂಗಾರದ ಪದಕದೊಂದಿಗೆ ಸನ್ಮಾನಿಸಿದ್ದಾರೆ. ಇದರ ಜೊತೆಗೆ ಸಂಗೀತ ರತ್ನ, ಅನರ್ಘ್ಯ ರತ್ನ ಸೇರಿದಂತೆ ಅಂತರ್ಷ್ಟ್ರೀಯ ಮಟ್ಟದಲ್ಲಿ ಆರ್ಯಭಟ ಪ್ರಶಸ್ತಿಯೂ ದೊರೆತಿದೆ.   ಓಮನ್ ತುಳುವೆರ್ ತುಳುನಾಡ ಗಾನ ಗಂಧರ್ವ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಸೋತ್ಸವ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಅನೇಕ ಸಂಘ ಸಂಸ್ಥೆಗಳ ವತಿಯಿಂದಲೂ ಲೆಕ್ಕವಿಲ್ಲದಷ್ಟು ಪ್ರಶಸ್ತಿಗಳು ಲಬಿಸಿದೆ. 

ತಮ್ಮ ಸ್ವರಾಭಿಷೇಕದ ಮೂಲಕ ಜನಮಾನಸದಲ್ಲಿ ಅಚ್ಚಳಿಯದೇ ಎಂದೆಂದಿಗೂ ಕೂರವ ನೆನಪಾದ ಇವರು ಇನ್ನೂ ಅನೇಕ ಸಾಧನೆ ಮಾಡುವಂತಾಗಲಿ, ಲೆಕ್ಕವಿಲ್ಲದಷ್ಟು ಪ್ರಶಸ್ತಿ, ಬಿರುದುಗಳು ಅರಸಿ ಬರಲಿ, ಇಡುವ ಪ್ರತೀ ಹೆಜ್ಜೆಯಲ್ಲೂ ಗೆಲುವೇ ಕಂಡು ಸೋಲನ್ನೇ ಕಾಣದ ಜೀವನ ನಿಮ್ಮದಾಗಲಿ, ದೇಶ ವಿದೇಶಗಳಲ್ಲಿ ನಿಮ್ಮ ಗಾಯನ ಪಸರಿಸುವ ಜೊತೆಗೆ, ನಿಮ್ಮಿಂದ ಅಳಿಸಿ ಹೋಗುತ್ತಿರುವ ಸಂಸ್ರೃತಿಯ ಪರಿಚಯ ಮುಂದಿನ ಪೀಳಿಗೆಗಾಗಲಿ. ನಿಮ್ಮ ಧ್ವನಿ ಚಿರಸ್ಥಾಯಿಯಾಗಿ ಉಳಿದು, ಅದರ ಗಂಧ ಲೋಕದಲ್ಲೆಲ್ಲಾ ಪಸರಿಸಲಿ. ನಿಮ್ಮ ಮುಂದಿನ ಹೆಜ್ಜೆಗೆ ಶುಭವಾಗಲಿ. 

ಲೇಖನ 


ಯಶು ಬೆಳ್ತಂಗಡಿ.