ರಾಜೀವ್ ಬಿಗ್ಬಾಸ್ ಮನೆಯಲ್ಲಿ ಹೆಸರು ಮಾಡುವ ಮೊದಲು ಹೇಗೆ ಪರಿಚಿತರಾಗಿದ್ದರು ತಿಳಿದಿದೆಯೇ???
ಬಿಗ್ ಬಾಸ್ ಮನೆಯಲ್ಲಿ
ಬಹಳ ಅತ್ಯುತ್ತಮವಾಗಿ ಆಟವಾಡಿ
ಜನಪ್ರಿಯತೆಯನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಿರುವ ರಾಜೀವ್,,..
ಈ ಮುನ್ನ ಯುವಕರಿಗೆ ಬಹಳ ಚೆನ್ನಾಗಿ ತಿಳಿದಿದ್ದರು, ಸಿನಿಮಾ ಗಳಲ್ಲಿ ನಟಿಸಿದರೂ ಜನಪ್ರಿಯತೆ ಬಂದಿರಲಿಲ್ಲ, ಆದರೆ ಕ್ರಿಕೆಟ್ ಲೀಗ್ ನಲ್ಲಿ ಕಿಚ್ಚ ಸುದೀಪ್ ಜೊತೆ ಸೇರಿ ಸಾಕಷ್ಟು ಕೊಡುಗೆ ನೀಡಿ ಪಂದ್ಯಗಳನ್ನು ಗೆಲ್ಲಿಸಿ ಕೊಟ್ಟಿರುವ ರಾಜೀವ್ ರವರು ಯುವಕರಿಗೆ ಹೆಚ್ಚಾಗಿ ತಿಳಿದಿದ್ದರು.
ಇತ್ತೀಚೆಗಷ್ಟೇ ಬಿಗ್ಬಾಸ್ ರಾಜೀವ್ ರವರಿಗೆ ವಿಶೇಷ ಅವಕಾಶವನ್ನು ನೀಡಿ ರಾಜೀವ್ ರವರ ಮನೆಯಿಂದ ವಿಶೇಷ ಸಂದೇಶವನ್ನು ಹೊತ್ತು ತಂದಿದ್ದರು, ಈ ಮೆಸೇಜ್ ನಲ್ಲಿ ರಾಜೀವ್ ರವರ ಪತ್ನಿ ರೇಷ್ಮಾ ರವರು ಮಾತನಾಡಿ, ಬೇಬಿ ಕ್ಯಾಪ್ಟನ್ ಆಗಿದ್ದಕ್ಕೆ ನಿನಗೆ ಶುಭಾಶಯಗಳು ಚೆನ್ನಾಗಿ ಆಟ ಆಡುತ್ತಿದ್ದೀಯಾ, ಹೀಗೆ ಆಟವನ್ನು ಮುಂದುವರೆಸಿ, ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ, ನೀವು ಯಾವುದೇ ಕ್ರೀಡೆಯಲ್ಲಿ ತಂಡವನ್ನು ಬಹಳ ತಾಳ್ಮೆಯಿಂದ ಮುನ್ನಡೆಸುತ್ತೀರೀ, ಅದೇ ರೀತಿ ಬಿಗ್ ಬಾಸ್ ಮನೆಯಲ್ಲಿ ಕೂಡ ಕ್ಯಾಪ್ಟನ್ಸಿ ಮಾಡಿ, ನಿಮ್ಮ ಕೂದಲು ಕೆಳಗೆ ಕಟ್ಟಿರುವುದು ಚೆನ್ನಾಗಿಲ್ಲ, ನಾನು ಕಟ್ಟುವ ಹಾಗೆ ಮೇಲೆ ಜುಟ್ಟು ಕಟ್ಟಿಕೊಳ್ಳಿ ಎಂದು ಹೇಳಿದರು..
ರಾಜೀವ್ ಪತ್ನಿ ರವರು ಮಾತನಾಡಿದ ಮಾತುಗಳು ವೈರಲ್ ಆಗಿತ್ತು, ಇನ್ನು ರಾಜೀವ್ ರವರ ಪತ್ನಿ ರವರ ಕುರಿತು ನಿಮಗೆ ಮಾಹಿತಿ ನೀಡುವುದಾದರೆ, ರಾಜೀವ್ ಪತ್ನಿ ಒಬ್ಬರು ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ತಮ್ಮದೇ ಆದ ಸ್ವಂತ ಸ್ಟುಡಿಯೋ ಹೊಂದಿರುವ ರೇಷ್ಮಾ ರವರು ರಾಜೀವ್ ರವರ ಎಲ್ಲ ಬಟ್ಟೆಗಳನ್ನು ತಾವೇ ಡಿಸೈನ್ ಮಾಡುತ್ತಾರೆ ಎಂಬುದು ತಿಳಿದು ಬಂದಿದೆ..
ಏನೇ ಆಗಲಿ ಈ ಸಲ ಬಿಗ್ಬಾಸ್ ಸೀಜನ್ 8ರ ಒಬ್ಬ ಬಲಿಷ್ಟ ಪ್ರತಿಭೆ ರಾಜೀವ್. ತಮ್ಮ ಆಟ ಮಾತ್ರವಲ್ಲದೇ, ಎಲ್ಲರನ್ನೂ ನೋಡಿಕೊಳ್ಳುವ ರೀತಿ, ಅವರೊಂದಿಗೆ ಬೆಲೆಯುವ ರೀತಿ, ಅವರ ಮಾತುಗಳು ಎಲ್ಲರಿಗೂ ಹಿಡಿಸಿವೆ. ಅವರು ಎಲ್ಲಾ ಕೆಲಸಗಳಲ್ಲೂ ತಮ್ಮನ್ನು ತಾವೇ ತೊಡಗಿಸಿಕೊಳ್ಳುವ ರೀತಿಯಿಂದ, ಅಡುಗೆ ಮನೆಯಲ್ಲಿ ಮಾಡುವ ಸಹಾಯಗಳಿಂದ ಎಲ್ಲರ ಮನಗಳಲ್ಲೂ ವಿಶೇಷ ಸ್ಥಾನ ಪಡೆಯುತ್ತಿದ್ದಾರೆ.
ಈ ಬಾರಿಯ ಅತ್ಯಂತ ಪ್ರಬಲ ಆಟಗಾರನೆಂದೇ ರಾಜೀವ್ ಅವರನ್ನು ಎಲ್ಲರೂ ಕರೆಯುತಿದ್ದಾರೆ. ಅವರು ಬಿಗ್ಬಾಸ್ ಗೆದ್ದುಬರಲಿ. ಬಳಿಕ ಇನ್ನಷ್ಟು ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿ ಎಂಬುದೇ ನಮ್ಮ ಆಶಯ.
ಇನ್ನೂ ಅನೇಕ ಸುದ್ದಿಗಳು, ಲೇಖನಗಳಿಗಾಗಿ ನಮ್ಮ ನಮ್ಮ SR Kannada ವಾಟ್ಸಾಪ್ ಗ್ರೂಪಿಗೆ ಸೇರಿಕೊಳ್ಳಿ. ನಿಮ್ಮ ಊರಿನ ಯಾವುದೇ ಕಾರ್ಯಕ್ರಮಗಳ ಸುದ್ದಿಗಳನ್ನು ಪ್ರಕಟಿಸಲು ಸಂಪರ್ಕಿಸಿ 7348969214

