ಮರಳಿ ಜೀವ ಪಡೆದುಕೊಂಡ ಮಚ್ಚಿನ ಗ್ರಾಮದ ವಿದ್ಯುದೀಪಗಳು.

ಸುಮಾರು ಐದು ವರ್ಷದ ಹಿಂದಿನ ಕಥೆ ಮತ್ತು ವ್ಯಥೆಯಿದು. ಮಚ್ಚಿನ ಗ್ರಾಮ ಪಂಚಾಯತ್ ಅಂದರೆ ಎಲ್ಲರಿಗೂ ಅಸಡ್ಡೆ. ಅಲ್ಲಿ ಒಂದು ಕೆಲಸಕ್ಕೆ ವಾರಗಟ್ಟಳೆ ಅಲೆಯಬೇಕಾಗಿತ್ತು. ಆದರೆ 2021ನೇ ಸಾಲಿನ ಚುನಾವಣೆಯಲ್ಲಿ ಇದೀಗ ಈ ಗ್ರಾಮ ಪಂಚಾಯತ್ ಕಾಂಗ್ರೆಸ್ ಮುಕ್ತವಾಗಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಇದೀಗ ಒಂದೊಂದೇ ಕೆಲಸ ಕಾರ್ಯಗಳು ಗ್ರಾಮದ ತುಂಬೆಲ್ಲಾ ಆರಂಭಗೊಂಡಿದೆ. 



 ಕಾಂಗ್ರೆಸ್ ಪಕ್ಷ ಆಡಳಿತ ಸಮಯದಲ್ಲಿ ಹಾಕಿದ್ದ ವಿದ್ಯುದೀಪ ಒಂದೇ ತಿಂಗಳಿಗೆ ಉರಿಯದೇ ಕೆಟ್ಟು ಹೋಗಿತ್ತು. ಇದೀಗ ಇಂದಿನಿಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ತುಂಬೆಲ್ಲಾ ವಿದ್ಯುದೀಪದ ಕೆಲಸಗಳು ಆರಂಭಗೊಂಡಿವೆ. ಇಂದು ಮಚ್ಚಿನದ ಬಂಗಳಾಯಿ, ಕಲಾಯಿ,ಜೀಮಗಿರಿ ಕಡೆಗೆ ವಿದ್ಯುದೀಪಗಳನ್ನು ಹಾಕಲಾಯಿತು. ಈ ಸಂಧರ್ಭದಲ್ಲಿ ಪಂಚಾಯತ್ ಸದಸ್ಯರಾದ ದಿನೇಶ್ ಜೊತೆಯಿದ್ದರು. 




ಇನ್ನೂ ಅನೇಕ ಸುದ್ದಿಗಳು, ಲೇಖನಗಳಿಗಾಗಿ ನಮ್ಮ SR Kannada ವಾಟ್ಸಾಪ್ ಗ್ರೂಪಿಗೆ ಸೇರಿಕೊಳ್ಳಿ. ನಿಮ್ಮ ಊರಿನ ಸಮಸ್ಯೆಗಳನ್ನು, ಕಾಮಗಾರಿಗಳನ್ನು, ಕಾರ್ಯಕ್ರಮಗಳ ಮಾಹಿತಿಯನ್ನು ನಮ್ಮ ವಾಟ್ಸಾಪ್ ನಂಬರಿಗೆ ಫೋಟೋ ಸಮೇತ ಕಳುಹಿಸಿಕೊಟ್ಟಲ್ಲಿ, ಸೂಕ್ತವಾದವುಗಳನ್ನು ಪ್ರಕಟಿಸಲಾಗುವುದು. ನಿಮ್ಮ ಊರಿನ ಯಾವುದೇ  ಸುದ್ದಿಗಳನ್ನು ಪ್ರಕಟಿಸಲು ಸಂಪರ್ಕಿಸಿ 7348969214