ಸರ್ಕಾರದಿಂದ ಎರಡು ಲಕ್ಷ ಪ್ರೋತ್ಸಾಹಧನ ಸಿಗುತ್ತಿರುವ ಬಗ್ಗೆ ನಿಮಗೆ ತಿಳಿದಿದೆಯೇ??
ಆಯುಷ್ಯ ಮನುಜನ ಅತೀ ಮೌಲ್ಯವಾದ ಸ್ವತ್ತು. ಆದರೆ ಅದು ಆರೋಗ್ಯವಾದ ಆಯುಷ್ಯ ಆಗಿದ್ದರೆ ಮಾತ್ರ. ಪ್ರತಿಯೊಬ್ಬ ಮಾನವನಿಗೂ ತಾನು ತನ್ನ ಜೀವನದಲ್ಲಿ ಅತೀ ಅಮೂಲ್ಯ ಜೀವನವನ್ನು ಅತೀ ಅನಂದದಿಂದ ಕಳೆಯಬೇಕೆಂದು ಕನಸಿರುತ್ತದೆ. ತನ್ನ ಜೀವನವೇ ಒಂದು ಸುಂದರ ನೆನಪಾಗಿರಬೇಕೆಂದು ಹಂಬಲವಿರುತ್ತದೆ. ಇದೆಲ್ಲಾ ಸಾಧ್ಯ ಆಗೋದು ಒಂದು ಆರೋಗ್ಯಕರವಾದ ಬಾಳು ಆತನಿಗೆ ದೊರೆತಾಗ..
ಕೆಲವೊಂದು ಬದುಕೇ ಹಾಗೇ. ದೇವರು ನಗು, ಸಂತೋಷ ಎಲ್ಲವನ್ನು ಕೊಟ್ಟಿರುತ್ತಾನೆ. ಆದರೆ ಕೆಲವೇ ಕ್ಷಣಗಳಿಗೆ ಮಾತ್ರ, ಆಮೇಲೆ ಎಲ್ಲವನ್ನೂ ಒಂದೇ ಬಾರಿಗೆ ಕಿತ್ತುಕೊಂಡುಬಿಡುತ್ತಾನೆ. ಅತ್ತ ಕಿತ್ತು ತಿನ್ನುವ ಬಡತನ, ಇತ್ತ ಸಾಯಲೂ ಬಿಡದ, ಬದುಕಲು ಬಿಡದ ಖಾಯಿಲೆ. ಬದುಕಿನ ಎಲ್ಲಾ ದಾರಿಯು ಮುಚ್ಚಿಹೋಗಿ ಕೊನೆಗೆ ಕಂಗಾಲಾಗಿ ಬದುಕುವ ಭರವಸೆಯನ್ನೇ ಕಳೆದುಕೊಳ್ಳುವ ಜೀವಗಳಿಗೆ ಮತ್ತೆ ಜೀವನ ಕೊಟ್ಟಿದ್ದೇ ಈ ಜನ್ ಔಷಧ್.
ಜನ್ ಔಷಧ್ ಅಂದರೆ ಒಂದೇ ಮಾತಲ್ಲಿ "ಬಡವರ ಸಂಜೀವಿನಿ". ಬಡವರಿಗೆ ಮತ್ತು ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಔಷಧಿಗಳನ್ನು ಒದಗಿಸುವ ಒಂದು ಅತ್ಯಧ್ಬುತ ಯೋಜನೆಯೇ ಈ ಜನ್ ಔಷಧಿ. 2008ರಲ್ಲಿ ಈ ಯೋಜನೆ ಜಾರಿಗೆ ತರಲಾಯಿತು. ಸಾಮಾನ್ಯವಾಗಿ 100 ರೂಪಾಯಿಗಳಿಗೆ ಸಿಗುವ ಮಾತ್ರೆಗಳು ಇಲ್ಲಿ 10 ರೂಪಾಯಿಗಳಿಗೆ ಸಿಗಬಹುದು. ಈ ಜನ್ ಔಷಧ್ ಕೇಂದ್ರಗಳು ಸರ್ಕಾರಿ ಆಸ್ಪತ್ರೆಗಳ ಆಸುಪಾಸಿನಲ್ಲಿ ಇರುತ್ತವೆ. ಎಲ್ಲರಿಗೂ ಔಷಧಿಗಳು ಸಿಗಬೇಕೆನ್ನುವ ಮಹತ್ತರವಾದ ಚಿಂತನೆಯೊಂದಿಗೆ ಹುಟ್ಟಿಕೊಂಡ ಯೋಚನೆ ಮತ್ತು ಯೋಜನೆಯೇ ಈ ಜನ್ ಔಷಧಿ. ಮಾರುಕಟ್ಟೆ ಬೆಲೆಗಿಂತ 70ರಷ್ಟು ಕಡಿಮೆ ದರದಲ್ಲಿ ಸಿಗುವ ಈ ಈ ಜನ್ ಔಷಧಿಗಳು ಎಷ್ಟೋ ಕೈಚೆಲ್ಲಿ ಕುಳಿತ ನಿರಾಸೆಯ ಬದುಕಿಗೆ ಬೆಳಕಾಗಿ ಅವರ ಕಣ್ಣುಗಳಲ್ಲಿ ಭರವಸೆ ಮೂಡಿಸಿವೆ.
ಒಂದು ಪಾರಾಸಿಟಮೊಲ್ ಮಾತ್ರೆಯ ಬೆಲೆ 16 ರೂಪಾಯಿಗಳು ಎಂದಿಟ್ಟುಕೊಳ್ಳೋಣ, ಜನ್ ಜೌಷಧಿಯಲ್ಲಿ ಅದು ಕೇವಲ 4 ರಪಾಯಿ 80 ಪೈಸೆಗಳಾಗಿರಬಹುದು. ಇನ್ನು ಈ ರೀತಿ ಅಗ್ಗವಾಗಿ ಸಿಗುವ ಕಾರಣವೆಂದರೆ ವ್ಯಾಟ್ ತೆರಿಗೆ ಮತ್ತು ಎಕ್ಸೆಸ್ ಕರಗಳ ಇಳಿಕೆ. ಸಾಮಾನ್ಯವಾಗಿ ನಾವು ಬೇರೆ ಕಡೆಗಳಲ್ಲಿ ಖರೀದಿಸುವ ಮಾತ್ರೆಗಳಿಗೆ ವ್ಯಾಟ್ ತೆರಿಗೆ ಮತ್ತು ಎಕ್ಸೆಸ್ ಕರಗಳ ಸಂಕಲನವಾಗಿರುತ್ತದೆ. ಈ ಔಷಧ ಕೇಂದ್ರಗಳಲ್ಲಿ ಇವುಗಳನ್ನು ಕಡಿತಗೊಳಿಸಿ, ಬಡವ, ಬಲ್ಲಿದನೆನ್ನದೆ ಎಲ್ಲರಿಗೂ ಜೀವಿಸುವ ಹಕ್ಕು ನೀಡಲು ಹೊರಟಿತು. ಎಲ್ಲರ ಮೊಗದಲ್ಲೂ ಸಂತೋಷದ ನಗು ತರಿಸಲು ಹೊರಟಿತು. ಈ ನಿಟ್ಟಿನಲ್ಲಿ ಮೋದಿ ಸರ್ಕಾರ ಅವುಗಳನ್ನು ವಿಸ್ತರಿಸಿ, ಯಶಸ್ವೀ ಜಾರಿಗೊಳಿಸಲು ಚಿಂತಿಸಿತು. ರಾಜ್ಯ ಸರ್ಕಾರವು ಇದನ್ನು ಕಾರ್ಯರೂಪ ತರುವಲ್ಲಿ ಯಶಸ್ವೀ ಚಿಂತನೆ ಮಾಡಿತು.
2007ರ ಮಾರ್ಚ್ ಹೊತ್ತಿನಲ್ಲಿ ಒಂದು ಸಾವಿರ ಜೆನ್ ಔಷಧಗಳನ್ನು ತೆರೆಯುವ ಪ್ರಸ್ತಾವನೆ ಸರ್ಕಾರದಾಗಿತ್ತು. ಕೊನೇ ಪಕ್ಷ ದೇಶದ 543 ಲೋಕಸಭಾ ಕ್ಷೇತ್ರದಲ್ಲಿ ಒಂದೊಂದು ಅಂಗಡಿ ತೆರೆಯಬೇಕೆಂಬುದು ಈ ಯೋಜನೆಯ ಗುರಿಯಾಗಿತ್ತು. ಆದರೆ 2012ರಲ್ಲಿ 112 ಮಳಿಗೆಗಳು ಆರಂಭಗೊಂಡು ಬರಿ 99 ಮಳಿಗೆಗಳು ಮಾತ್ರ ಕಾರ್ಯಾರಂಭಗೊಂಡಿತು. ಇಂದು ಅಚ್ಚರಿಯೆಂಬಂತೆ ಇಲ್ಲಿಯವರೆಗೆ ದೇಶದಲ್ಲಿ 6700 ಜನ್ ಔಷಧ್ ಕೇಂದ್ರಗಳು ಯಶಸ್ವೀಯಾಗಿ ಆರಂಭಗೊಂಡು ಬಡವರ ಕಣ್ಣೀರನ್ನು ಒರೆಸಿವೆ. ಅವರಿಗೊಂದು ಹೊಸ ಉಸಿರಿಗೆ ಹೆಸರಾಗಿವೆ. ಸಾರ್ಥಕತೆಯ ಜೀವನವಾಗಿದೆ. ಸ್ವಾವಲಂಬಿ ಬದುಕಾಗಿದೆ.
ಕೆಲವೊಂದು ವಿಷಯಗಳೇ ಹಾಗೇ ಮುಖ್ಯವಾಗಿ ಯಾವುದು ಜನಸಾಮಾನ್ಯರ ಕಿವಿಗೆ ತಲುಪಬೇಕಾಗಿತ್ತೋ ಅ ಮುಖ್ಯವಾದ ವಿಷಯ ತಲುಪುವುದೇ ಇಲ್ಲ. ಈ ಜನ್ ಔಷಧ್ ಕೂಡಾ ಹಾಗೇ ಆಯಿತು. ಅದು ಎಲ್ಲಾ ವರ್ಗಗಳವರೆಗೆ ಮೊದಲು ತಲುಪಲೇ ಇಲ್ಲ. ಇನ್ನೊಂದು ಸಂತಸದ ವಿಷಯವೆಂದರೆ ಇದು ಒಂದು ರೀತಿಯಲ್ಲಿ ಕೆಲಸವನ್ನು ಸೃಷ್ಟಿಸಿತು. ಸರ್ಕಾರದಿಂದಲೇ ಈ ಅಂಗಡಿಗಳನ್ನು ತೆರೆಯುವವರಿಗೆ 2.5 ಲಕ್ಷದವರೆಗೆ ಧನಸಹಾಯ ನೀಡಲು ಮುಂದಾಯಿತು. ಈ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸಲು ಅಂಗಡಿಗಳನ್ನು ತೆರೆಯುವುದಾದರೆ ಅಗತ್ಯ ಪೀಠೋಪಕರಮಗಳಿಗಾಗಿ 1 ಲಕ್ಷ, ಕಂಪ್ಯೂಟರ್, ಪ್ರಿಂಟರ್ ಮುಂತಾದ ಉಪಕರಣಗಳಿಗಾಗಿ 50 ಸಾವಿರ, ಇದರ ಜೊತೆಗೆ ಆರಂಭದಲ್ಲಿ ಉಚಿತ ಔಷಧಿಗಳನ್ನು ನೀಡುವ ಸಲುವಾಗಿ 1.5 ಲಕ್ಷದವರೆಗೆ ಪ್ರೋತ್ಸಾಹ ಧನವನ್ನು ಕೂಡಾ ನೀಡುವ ಸಾಧ್ಯತೆಗಳೊಂದಿಗೆ, ಅಂಗಡಿಗೆ ಬೇಕಾದ ಸ್ಥಳವನ್ನೂ ಕೂಡಾ ಸರ್ಕಾರವೇ ನೀಡುತ್ತದೆ. ಇನ್ನೂ ಮುಂದುವೆರೆದು ಸರ್ಕಾರವು ಜನರ ಅಗತ್ಯತೆಗಳಿಗಾಗಿ ಸ್ಪಂದಿಸಲು ಜಿಲ್ಲಾವಾರು ಮತ್ತು ಗ್ರಾಮೀಣವಾರು ಮಳಿಗೆಗಳನ್ನು ತೆರೆಯಲಿದೆ. ಮಾರುಕಟ್ಟೆಯಲ್ಲಿನ ನಿಜವಾದ ಬೆಲೆಗಿಂತ ಕಡಿಮೆ ದರದಲ್ಲಿ ಮಾರಲಿದೆ.
ಇಲ್ಲಿ ಅಗ್ಗದ ದರದಲ್ಲಿ ಯಾವ ಮಾತ್ರೆ ದೊರೆಯಬಹುದು ಎಂಬ ಸಂದೇಹ ಹಲವಾರು ಜನರ ಮನದಲ್ಲಿದೆ. ಇಲ್ಲಿ ಪಾರಾಸಿಟಮೊಲ್, ಆಸ್ಪರಿನ್, ಡೋಲೋ, ಎಮಿಸೆಟ್, ಆಂಟಿಬಯೋಟಿಕ್ಸ್ ಸೇರಿದಂತೆ ಎಲ್ಲಾ ಮಾತ್ರೆಗಳು ಸಿಗುವುದರ ಜೊತೆಗೆ ಕ್ರಾಪ್ಟ್ ಬ್ಯಾಂಡೇಜ್, ಇಂಜೆಕ್ಷನ್ ಕೂಡಾ ದೊರೆಯುವುದರಿಂದ ಎಲ್ಲಾ ವರ್ಗದ ಜನರು ಇದನ್ನು ಬಳಸಿಕೊಂಡು ಇದರ ಸದುಪಯೋಗ ಪಡೆಯಬಹುದಾಗಿದೆ.
ಜೀವನದಲ್ಲಿ ಈಗ ಎಲ್ಲರಿಗೂ ಜೀವಿಸುವ ಸಮಾನ ಹಕ್ಕನ್ನು ಸರ್ಕಾರ ಒದಗಿಸಿದೆ. ಎಲ್ಲರಿಗೂ ಸಮಾನ ಉಸಿರಾಟದ ಹಕ್ಕನ್ನು ಒದಗಿಸಿದೆ. ಇಲ್ಲಿ ಬಡವ ಬಲ್ಲಿದನೆಂಬ ಬಿರುಕು ಸೃಷ್ಟಿಯಾಗಿ ಎಷ್ಟೋ ಜೀವಗಳು ಕಾಯಿಲೆಯ ನರಳಾಟದಿಂದ ಒದ್ದಾಡುವುದನ್ನು ತಡೆದಿದೆ. ಒಂದಾನೊಂದು ಕಾಲದಲ್ಲಿ ಇದ್ದ ಆ ದುಬಾರಿ ಹಣದ ಪ್ರಭಾವದಿಂದ ಜನಸಾಮಾನ್ಯರು ನರಳುತಿದ್ದ ಆ ಕಾಲವನ್ನು ಜನ್ ಔಷಧ್ ಎಂಬ ಮಹತ್ತರ ಯೋಜನೆ ತಡೆದಿದೆ. ದಿಕ್ಕಿಲ್ಲದ ಅನಾರೋಗ್ಯದ ನರಳಾಟದ ಬದುಕಿಗೊಂದು, ಮಾಯಾವಿಯಂತೆ ಬಂದು ಕೈ ಹಿಡಿದ ಸಂಜೀವಿನಿ ಈ ಜನ್ ಔಷಧ್. ನೋವಲ್ಲೇ ಕಳೆದು ಬದುಕಿಷ್ಟೇ ಎಂದು ನರಳುತಿದ್ದ ಜೀವನಕ್ಕೆ ಮತ್ತೆ ಭರವಸೆಯ ಗಾಳಿ ಬೀಸಿದಂತೆ ಭಾಸವಾದ ಯೋಜನೆ ಜನ್ ಔಷಧ್.
ಬರಿಯ ಚಿಂತೆಯ ಗೆರೆಗಳೇ ಮೂಡುತಿದ್ದ ಆ ಹಣೆಗಳಲ್ಲಿ ಆ ಗೆರೆಗಳನ್ನು ಅಳಿಸಿ ಹಾಕಿ ಕಂಗಳ ತುಂಬೆಲ್ಲಾ ಹೊಸ ನಂಬಿಕೆಯ ಹುರುಪನ್ನು ಮೂಡಿಸಿದ ಮಹತ್ತರ ಯೋಜನೆ ಈ ಜನ್ ಔಷಧ್. ಈ ಜನ್ ಔಷಧ್ ಎಂದರೆ ಬರಿಯ ಒಂದು ಯೋಜನೆಯಾಗಲಿ, ಸರ್ಕಾರದ ಯೋಚನೆಯಾಗಲಿ ಅಲ್ಲ. ಅದು ಬಡವರ ಸಂಜೀವಿನಿ, ಜನಸಾಮಾನ್ಯರ ಭರವಸೆ, ಅಸಹಾಯಕರ ಜೀವನ. ಸ್ವಾಭಿಮಾನದ ಬದುಕಿನ ಮೊದಲ ಹೆಜ್ಜೆಗೆ ಅಡಿಪಾಯ. ಒಟ್ಟಿನಲ್ಲಿ ಜೀವನದ ನಗುವಿನ ಒಂದಂಶಕ್ಕೆ ಕಾರಣವಾದ ಈ ಜನ್ ಔಷಧ್ ಎಂಬ ನಗುವಿಗೆ, ಅದನ್ನು ನಮ್ಮ ಕೈಗೆಟುವಂತೆ ಮಾಡಿದ ಮೋದಿ ಸರ್ಕಾರದ ಚಿಂತನೆಗೆ ನಮ್ಮದೊಂದು ಈ ಬರಹದ ಪುಟ್ಟ ನಮನ.
ಈ ಯೋಜನೆಯ ಮೂಲಕ ಇನ್ನೂ ಸಾವಿರಾರು ಜೀವಗಳಿಗೆ ಆಸರೆಯಾಗಲಿ, ಯಾರೂ ಔಷಧ ಸಿಗದೆ ಸಾಯದಿರುವ ಪರಿಸ್ಥಿತಿ ನಿರ್ಮಾಣ ಆಗದಿರಲಿ ಎಂಬುದೇ ನನ್ನ ಈ ಬರಹದ ಆಶಯ. ಈ ಒಂದು ಅಮೂಲ್ಯ ಯೋಜನೆಯ ಬಗ್ಗೆ ನಮ್ಮಿಂದಾಗುವಷ್ಟು ಇನ್ನೊಬ್ಬರಿಗೆ ತಿಳಿಸುವ ಸಣ್ಣ ಸಮಾಜಸೇವೆಯನ್ನು ನಾವೂ ಮಾಡೋಣ. ಈ ಒಂದು ದೊಡ್ಡ ಕಾರ್ಯದಲ್ಲಿ ನಾವೂ ಅಳಿಲು ಸೇವೆ ಮಾಡಿ ನಮ್ಮಿಂದಾಗುವಷ್ಟು ಒಳಿತು ಮಾಡೋಣ.

