ಮಚ್ಚಿನದ ಚಿಕ್ಕ ಆಸ್ಪತ್ರೆ ಮಾದರಿ ಆಸ್ಪತ್ರೆಯಂತಿದೆ.

ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ಜನರಿಗೆ ಊರಿನಲ್ಲೊಂದು ಪುಟ್ಟ ಆಸ್ಪತ್ರೆ ಊರಿನವರಿಗಾಗಿ ಊರವರ ಬಹುಸಮಯದ ಒತ್ತಡದ ನಂತರ ಆರಂಭಗೊಂಡಿತ್ತು. ಇದೀಗ ವರುಷಗಳು ಕಳೆದಿವೆ, ಆ ಆಸ್ಪತ್ರೆಯನ್ನು ಒಳಹೊಕ್ಕು ನೋಡಿದರೆ ಇರುವುದು ಪುಟ್ಟದಾದ ಒಂದು ಕೋಣೆ‌. 



ಅದು ಎಷ್ಟು ಅಚ್ಚುಕಟ್ಟಾಗಿದೆ ಅಂದರೆ, ಇರುವ ಒಂದೇ ಕೋಣೆಯಲ್ಲೇ ಎಲ್ಲಾ ಸೌಕರ್ಯಗಳನ್ನು ಸಮರ್ಪಕವಾಗಿ ಜೋಡಿಸಿಕೊಂಡು, ಬರುವ ರೋಗಿಗಳನ್ನು ವಿನಯತೆಯಿಂದ ಮಾತಾನಾಡಿಸಿ, ಉಪಚರಿಸುವ ಬಗೆ ಯಾವುದೇ ಖಾಸಗಿ ಆಸ್ಪತ್ರೆಗೆ ಕಮ್ಮಿಯಿಲ್ಲ.



ಸರಕಾರಿ ಆಸ್ಪತ್ರೆಗಳೆಂದರೆ ಅಸಡ್ಡೆ, ತಾತ್ಸಾರ ಬರುವ ಈ ಕಾಲದಲ್ಲಿ ಇಂತಹ ಆಸ್ಪತ್ರೆಗಳು ಇನ್ನೂ ಆರಂಭಗೊಂಡರೆ, ಬಡವರು ಸರಕಾರಿ ಆಸ್ಪತ್ರೆಗೆ ಹೆಮ್ಮೆಯಿಂದ ಹೋಗುವ ದಿನಗಳು ಹತ್ತಿರದಲ್ಲೇ ಬರಬಹುದು. ಇಂತಹ ಆಸ್ಪತ್ರೆಗಳನ್ನು, ಸಿಬ್ಬಂದಿಗಳನ್ನು ನಾವು ಪ್ರೋತ್ಸಾಹಿಸೋಣ...

ಇನ್ನೂ ಅನೇಕ ಸುದ್ದಿಗಳು, ಲೇಖನಗಳಿಗಾಗಿ ನಮ್ಮ SR Kannada ವಾಟ್ಸಾಪ್ ಗ್ರೂಪಿಗೆ ಸೇರಿಕೊಳ್ಳಿ. ನಿಮ್ಮ ಊರಿನ ಯಾವುದೇ ಕಾರ್ಯಕ್ರಮಗಳ ಸುದ್ದಿಗಳನ್ನು ಪ್ರಕಟಿಸಲು ಸಂಪರ್ಕಿಸಿ 7348969214